ಮರೆತು ಬಿಡು ಅ0ದಾಕ್ಷಣ
ಪ್ರಿಯೆ ಮರೆತು ಬಿಡು ಅ0ದಾಕ್ಷಣ ಮರೆತು ಬಿಡಲೇ? ಹೇಗೆ ಮರೆಯಲಿ.?ಇದು ಪ್ರೀತಿ ಕಣೆ.ನನ್ನ ಎದೆಯಾಳದಲ್ಲಿ ಬೇರೂರಿರುವ ಪ್ರೀತಿಯನ್ನು ಎದೆ ಬಗೆದು ತೋರಿಸುವುದಕ್ಕಾಗಲಿ,ಹನಿ ನೀರಿಗೆ ಮುದುಡಿ ನಾಶವಾಗುವ ಈ ಕಾಗದದಲ್ಲಿ ವಿವರಿಸುವುದಕ್ಕಾಗಲಿ,ಅಥವಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ ಇಷ್ಟು ಪ್ರೀತಿಸುತ್ತೇನೆ ಎ0ಬ ಅಳತೆ ಮಿತಿಯನ್ನು ತೋರಲಾಗದು,ಹೇಳಲಾಗದು,ವಿವರಿಸಲು ಅ0ತೂ ಸಾಧ್ಯನೇ ಇಲ್ಲ ಕಣೇ. ಯಾಕೆ ಗೊತ್ತಾ ..... ಇದು ನಿರ್ಮಲ ಪ್ರೀತಿ ಕಣೆ.
ನಿನ್ನ ದೇಹ , ಆಕಾರ ನೋಡಿ ಪ್ರೀತಿಸಿದ್ದೇ ಆದರೆ ನೀನು ಹೇಳಿದ0ತೆ ಮರೆತು ಬಿಡಬಹುದಿತ್ತು. ಆದರೆ ಇದು ಹಾಗಲ್ಲ. ಈಗಲಾದರೂ ನಿನಗೆ ಅರ್ಥವಾದೀತು ಎ0ದು ಭಾವಿಸುತ್ತೇನೆ. ನನ್ನ ಪ್ರೀತಿ ನಿನಗರ್ಥವಾಗಿದ್ದರೆ ಖ0ಡಿತ ನನಗೋ0ದು ಪತ್ರ ಬರೆಯುವಿಯಲ್ಲ.......!
ನಿರೀಕ್ಷೆಯಲ್ಲಿ ..........
ನಿನ್ನವನು.
ಲೋಡ್ ಆಗುತ್ತಿದೆ......