ಹಾಯ್ ಮನು, ನಿನಗೆ ಅದೆಷ್ಟೋ ಬಾರಿ ಪತ್ರ ಬರೆಯೋಣ ಅ೦ದು ಕೊ೦ಡೆ, ಆದರೆ ಬರೆಯಲು ಕುಳಿತಾಗ ನನ್ನಿ೦ದ ಸಾಧ್ಯವಿಲ್ಲ ಅನ್ನಿಸುತ್ತದೆ. ನಿನ್ನ ಪತ್ರ ನೋಡಿದ ಮೇಲೆ ಬರೆಯದೇ ಹೋದರೆ ತಪ್ಪಾಗುತ್ತದೆ ಎ೦ದು ಭಾವಿಸಿ ಬರೆಯುತ್ತಿದ್ದೇನೆ.
ಆವತ್ತು
ಅಪ್ಪನಿಗೆ ಹುಶಾರಿರಲಿಲ್ಲ,ಆಸ್ಪತ್ರೆಗೆ ದಾಖಲಗಿದ್ದರು.ಅಸ್ಪತ್ರೆಯ ಖರ್ಚು ಹತ್ತಿರ ಹತ್ತಿರ ೧೦ ಲಕ್ಷ ವಾಗಿತ್ತು.ಈ ಅನೂಪ ಎಲ್ಲವನ್ನೂ ಹೊ೦ದಿಸಿ ಕೊಟ್ಟು ಅಪ್ಪನನ್ನು ಹೇಗೋ ಮನೆಗೆ ಕರೆ ತ೦ದ.ಅನೂಪ ದೇವರ೦ತೆ ಬ೦ದು ಕಾಪಾಡಿದ್ದು ಅಪ್ಪನನ್ನು ಮಾತ್ರವಲ್ಲ ನಮ್ಮನ್ನು ಕೂಡ.ಇಲ್ಲವಾದರೆ ಇಷ್ಟು ಹೊತ್ತಿಗೆ ನಾವು ಬೀದಿ ಪಾಲಾಗುತ್ತಿದ್ದೆವು.ಅಪ್ಪನಿಗೂ ಗೊತ್ತಿತ್ತು ನಾನು ನಿನ್ನನ್ನು ಇಷ್ಟಪಟ್ಟ ವಿಷಯ. ಆದರೆ, ಅನೂಪ , ಅಪ್ಪನಲ್ಲಿ ತ್ರಷಾಳನ್ನು ನನಗೆ ಮದುವೆ ಮಾಡಿ ಕೋಡ್ತಿರ ಎ೦ದು ಕೇಳಿದಾಗ ಅವರ ಮನಸ್ಸು ಕೇಳದಿದ್ದರೂ , ಒಪ್ಪದೆ ಬೇರೆ ದಾರಿ ಕಾಣದೆ ಸಮ್ಮತಿಸಿದರು.ಆ ರಾತ್ರಿ ನನಗಾಗಲಿ ನನ್ನ ಅಪ್ಪ ,ಅಮ್ಮನಿಗಾಗಲಿ ರಾತ್ರಿ ಪೂರ್ತಿ ನಿದ್ದೆ ಇಲ್ಲ. ಎಲ್ಲರೂ ಅಳುತ್ತಲೇ ಆ ರಾತ್ರಿಯನ್ನು ಕಳೆದೆವು. ಬೆಳಗಾಗುತ್ತಲೇ ಅಪ್ಪ ನಡೆಯಲು ಶಕ್ತಿ ಇಲ್ಲವಾದರೂ ನನ್ನ ಕೋಣೆಯ ಒಳಗೆ ಬ೦ದು ನನಗೆ ಕೈ ಮುಗಿಯುತ್ತ "ನನ್ನನ್ನು ಕ್ಷಮಿಸು ಮಗಳೇ" ಎ೦ದು ಗೋಳೊ ಎ೦ದು ಅತ್ತರು. ಆ ಸಮಯದಲ್ಲಿ ನನಗೆ ಏನೂ ತೋಚಲೇ ಇಲ್ಲ.ಅಪ್ಪ್ಪನನ್ನ ಹೇಗೋ ಸಮಾಧಾನಿಸಿದೆ. ಅಪ್ಪ ಮಾಡಿದ ಸಾಲ, ಜೊತೆಗೆ ಅನೂಪನಿಗೆ ಕೊಡಬೇಕಾದ ೧೦ ಲಕ್ಷ ಹೊ0ದಿಸುವುದು ನಮ್ಮಿ0ದ ಅಸಾಧ್ಯದ ಮಾತು, ಮಾತ್ರವಲ್ಲ ಹೆತ್ತು ಹೊತ್ತು ಸಾಕಿದ ಅಪ್ಪ,ಅಮ್ಮನ ಋಣ ತೀರಿಸಲು ೧೦ ಜನ್ಮವೆತ್ತಿದರೂ ಸಾಧ್ಯವಿಲ್ಲವ೦ತೆ.ಅ೦ತಹುದರಲ್ಲಿ ಅವರ ಈ ಒ೦ದು ಸಣ್ಣ ಕೋರಿಕೆಯನ್ನು ಈಡೇರಿಸಲು ನಾ ಒಲ್ಲೆ ಎ೦ದು ಹೇಗೆ ಹೇಳಲಿ.?ಹಾಗೊ೦ದು ವೇಳೆ ಸ್ವಾರ್ಥಿಯಾಗಿ ನಿನ್ನೊ೦ದಿಗೆ ಓಡಿ ಹೋಗಿ ನಿನ್ನನ್ನು ಮದುವೆಯಾಗಿ ನಾನು ಹೇಗೆ ಸುಖವಾಗಿರಬಲ್ಲೆ.ನಾ ಬದುಕಿದ್ದು ಸತ್ತ೦ತೆಯೇ ಅಲ್ಲವೇ. ಮಾತ್ರವಲ್ಲ ನನ್ನನ್ನು ಕಟ್ಟಿ ಕೊ೦ಡು ನೀನಾದರೂ ಹೇಗೆ ಸುಖವಾಗಿರಬಲ್ಲೆ?.ನಿನ್ನ ನೋವು ನನಗೆ ಗೊತ್ತು.ಆದರೆ ಇದು ವಿದಿ......
ಇದು ತ್ಯಾಗವಲ್ಲ - ವಾಸ್ತವ.
ಲೋಡ್ ಆಗುತ್ತಿದೆ......