Welcome, Guest   [ Register | Sign In | Take a tour | Adult Filter: On ]

ನಾ ಪ್ರೀತಿಸಿದ ಹುಡುಗಿಗೆ .....

ನಾ ಪ್ರೀತಿಸಿದ ಹುಡುಗಿಗೆ....


ಪ್ರಿಯೇ,
ನಿನ್ನನ್ನು ಗಿಳಿ ಹಸುರು ಬಣ್ಣದ ಚೂಡಿಯಲ್ಲಿ ಮೊದಲ ಬಾರಿ ನೋಡಿದಾಗಲೇ ನನ್ನ ಮೈಮನಸ್ಸು ಪುಳಕಗೊಂಡಿತ್ತು. ಆ ಗಿಳಿ
ಹಸುರು ಬಣ್ಣದ ಚೂಡಿ ನಿನಗೆ ಚೆನ್ನಾಗಿ ಒಪ್ಪುತ್ತೆ ಕಣೆ. ಅದಕ್ಕೆ ತಕ್ಕವಾದ ,ಆಕರ್ಷಕವಾದ ಆ ನಿನ್ನ ಕೆಂಪಾದ ತುಟಿ ಚೆರ್ರಿ
ಹಣ್ಣನ್ನು ನೆನಪಿಸುತ್ತೆ ಹುಡುಗಿ. ನವಿರಾಗಿ ಮುತ್ತಿಕ್ಕಬೇಕೆನಿಸುವ ಆ ನಿನ್ನ ಕೊರಳು.ಹಾಲು ಚೆಲ್ಲುವ ಬೆಳದಿಂಗಳಂತ ಆ ನಿನ್ನ
ನಗು. ಮುಚ್ಚಿ ತೆರೆಯುವ ಆ ನಿನ್ನ ಕಣ್ ರೆಪ್ಪೆಗಳ ಮಿಡಿತ.ಅಬ್ಬಾ! ನನ್ನ ಮನ ಗರಿ ಬಿಚ್ಚಿ ನಲಿವ ನವಿಲಾಯಿತು.ನಾನಿನ್ನು
ಮರೆತಿಲ್ಲ ಅಂದಿನ ದಿನ .ಮರೆತಿಲ್ಲ ಆ ಕ್ಷಣ. ಮರೆಯಲಾರೆ ......! ಎಂದೆಂದಿಗೂ

ಹಂತ ಹಂತವಾಗಿ ನೀನು ನನ್ನ ಪ್ರತಿ ನಾಡಿ ಮಿಡಿತಗಳಲ್ಲಿ, ಅಣು ಅಣುವಿನಲ್ಲಿ ಸೇರಿ ಹೋದೆ.ನಿನಗಾಗಿ ನಾನು ... ಅದೆಷ್ಟೋ
ಸುಂದರ ಕನಸುಗಳು...ಅವೆಷ್ಟೋ ಮನದ ತುಡಿತಗಳು.ನನ್ನ ಮನಸ್ಸೊಳಗೆ ವರ್ಣಮಯ ಚಿತ್ತಾರವನ್ನು ಬರೆದು ಬಿಟ್ಟೆ ನೀನು.
ನನ್ನೊಳಗೆ ನಾನು ನಿನ್ನನ್ನು ಪ್ರೀತಿಸುತ್ತ ಹೋದೆ. ಅರ್ಥವಿಲ್ಲದ ಪ್ರೀತಿ ಎನ್ನುವೆಯೋ ಏನು: ನಿನ್ನ ಮುಂದೆ ನನ್ನ ಪ್ರೀತಿಯನ್ನು
ಬಿಚ್ಹಿಡ ಬೇಕು ಎಂದು ತುಂಬಾ ಸಾರಿ ಪ್ರಯತ್ನಿಸಿದೆ. ಆದರೆ ಹೇಳ ಬೇಕೆಂದು ಪ್ರಯತ್ನ ಪಟ್ಟಾಗಲೆಲ್ಲ ನೀನಿನ್ನು ಎಳೆ ಕಂದಮ್ಮ .
ಈ ಪ್ರೀತಿ, ಅನುರಾಗ ಅರಿಯುವ ವಯಸ್ಸು ನಿನ್ನದಲ್ಲ ಅನ್ನಿಸಿ ಸುಮ್ಮನಾಗುತಿದ್ದೆ. (ನಾನು ಮೋಸ ಹೋಗಿದ್ದು ಕೂಡ ಇಲ್ಲೇ)

ನಾನು ಹೀಗೆ ಯೋಚಿಸಿ ಯೋಚಿಸಿ ನನ್ನ ತಲೆ ಮೇಲೆ ನಾನೇ ದೊಡ್ಡದೊಂದು ಕಲ್ಲು ಚಪ್ಪಡಿಯನ್ನು ಹಾಕಿ ಕೊಂಡೆ. ನನ್ನ
ಪ್ರೀತಿಯನ್ನು ನಿನ್ನಲ್ಲಿ ಹೇಳಿ ಕೊಳ್ಳುವ ಅವಕಾಶವೇ ಸಿಗಲಿಲ್ಲ. ಅದಾಗಲೇ ನಿನ್ನ ವಿವಾಹ ನಿಶ್ಚಿತಾರ್ಥ ನಡೆದು ಹೋಗಿತ್ತು.
ಆಮೇಲೆಯೂ ನನ್ನ ಭಾವನೆಗಳನ್ನು ನಿನ್ನ ಮುಂದೆ ಬಿತ್ತರಿಸಬಹುದಿತ್ತು ಎಂದು ನೀನು ಹೇಳುವೆಯೋ ಏನು!...
ಹೇಳಬಹುದಿತ್ತು. ಒಂದು ವೇಳೆ ನಿನಗೆ ಈಗಾಗಲೇ ನಿಶ್ಚಿತವಾಗಿದ್ದ ಹುಡುಗ ಇಷ್ಟವಾಗಿದ್ದು ,ನಾನು ಇಷ್ಟವಾಗದೆ ಹೋದರೆ !
ಅದನ್ನು ನಾನು ಹೇಗೆ ಸಹಿಸಲಿ. ಇವತ್ತು ನಿನ್ನ ನೆನಪಲ್ಲಿ ಕಷ್ಟವಾದರೂ ಬದುಕಿನಲ್ಲಿ ನಿನ್ನನ್ನೇ ನನ್ನ ಸ್ಪೂರ್ತಿಯಾಗಿಟ್ಟು
ಏನನ್ನಾದರೂ ಸಾಧಿಸ ಬೇಕೆನ್ನುವ ಛಲವುಳ್ಳವನಾಗಿದ್ದೇನೆ. ಒಂದು ವೇಳೆ ನಿನ್ನಲ್ಲಿ ನನ್ನ ಪ್ರೀತಿಯನ್ನು ಹೇಳಿಕೊಂಡು
ನೀನು ನನ್ನನ್ನು ತಿರಸ್ಕರಿಸಿದ್ದೇಯಾದರೆ; ಅದೇ ನೋವಲ್ಲಿ ನಿನ್ನನ್ನು ನೆನೆಸಿ ಕೊರಗಿ ಕೊರಗಿ ನನ್ನ ಜೀವನವೇ ಹಾಳಾಗಿ
ಹೋಗುತಿತ್ತು. ವಿಧಿಯನ್ನೇ ನಂಬಿ ಬದುಕುವವನು ನಾನಲ್ಲವೆಂದರೂ ವಿಧಿ ಎನ್ನುವುದು ಸುಳ್ಳಲ್ಲವಲ್ಲ......

ನನಗ್ಗೊತ್ತು ನಿನಗೆ ಮದುವೆಯಾಗಿದೆ,ಮಗುವೂ ಇದೆ. ಆದರೆ ಇವತ್ತಿಗೂ ನಾನು ನಿನ್ನನ್ನು ಮೊದಲಿನಂತೆಯೇ ಪ್ರೀತಿಸುತ್ತಿದ್ದೇನೆ .
ನನ್ನನ್ನು ನೀನು ಹುಚ್ಚ ಅಂದು ಕೊಳ್ಳಬಹುದು. ಆದರೆ ಅದಕ್ಕಿಂತಲೂ ಮಿಗಿಲಾಗಿ ಯೋಚಿಸಿ ನೋಡು.ನನ್ನ ಜೀವನ ಪೂರ್ತಿ
ನಿನ್ನನ್ನು ಪ್ರೀತಿಸಬಹುದು. ಯಾಕೆಂದರೆ ನಿಸ್ವಾರ್ಥ ಪ್ರೀತಿ ಹುಟ್ಟುವುದು ಒಂದೇ ಬಾರಿ ಕಣೆ .

ಇಂತಿ ನಿನ್ನೊಲವ ಬಯಸುವ,

***************
ಹಕ್ಕು ನಿರಾಕರಣೆ